ನಮಸ್ಕಾರ! ನೀವು ಸಂಪದ ಫೌಂಡೇಶನ್ನಿನ ಅಂತರ್ಜಾಲ ಪುಟಕ್ಕೆ ಬಂದಿದ್ದೀರಿ.

ಸಂಸ್ಥೆಯ ಬಗ್ಗೆ

ಸಂಪದ ಫೌಂಡೇಶನ್ ಸಂಪದ.net ಹಾಗೂ ಇತರ ಕನ್ನಡ ಯೋಜನೆಗಳನ್ನು ನಡೆಸಿಕೊಂಡು ಹೋಗಲು ಸ್ಥಾಪಿಸಲಾಗಿರುವ ಸಂಸ್ಥೆ. ಅಂತರ್ಜಾಲದಲ್ಲಿ ಯೂನಿಕೋಡ್ ಮೂಲಕ ಕನ್ನಡ ಬಳಸಿ ಕನ್ನಡಿಗರಲ್ಲಿ ಸಂವಹನ ಮೂಡಿಸಲು ೨೦೦೫ರಲ್ಲಿ ಹುಟ್ಟು ಹಾಕಿದ ಸಂಪದ.net ತಾಣ ಕನ್ನಡ ಲೇಖನಗಳ ಆಗರ - ತನ್ನ ಉದ್ದೇಶದಲ್ಲಿ ಸಫಲವಾಗಿದೆ. ಈಗ ಸಂಪದ ಸಮುದಾಯದ ತಂತ್ರಜ್ಞರು, ತಂತ್ರಜ್ಞಾನ ಆಸಕ್ತರು ಒಟ್ಟಾಗಿ ಕನ್ನಡ ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ಹಿಂದುಳಿಯದಂತೆ ನೋಡಿಕೊಳ್ಳಬೇಕೆಂಬ ಉದ್ದೇಶ ಹೊಂದಿದ ಹಲವು ಯೋಜನೆಗಳನ್ನು ಈ ಸಂಸ್ಥೆಯ ಮೂಲಕ ಹಮ್ಮಿಕೊಂಡಿದ್ದೇವೆ.

ಯೋಜನೆಗಳ ಪಟ್ಟಿ.